Kannada Baby Blogs

Kannada Baby Blogs (20)

ಕೊನೆಗೂ ನಿಮ್ಮ ಮಗುವನ್ನು ತೂಗಿ, ಲಾಲಿ ಹಾಡಿ, ಮುದ್ದು ಮಾಡಿ ಮತ್ತು ಸುಮ್ಮನಾಗುವಂತೆ ಮಾಡಿ ಅವಳನ್ನು ನಿದ್ರೆಗೆ ಹೋಗುವಂತೆ ಮಾಡಿ ನೀವು ಒಂದು ಒಳ್ಳೆಯ ನಿದ್ದೆಗಾಗಿ ಹಾಸಿಗೆ ಮೇಲೆ ಮಲಗಲು ಸಿದ್ಧವಾಗಿದ್ದೀರಾ. ಇದು ಅನಿಸಿದಷ್ಟು, ಓದಿದಷ್ಟು ಮತ್ತು ಹೇಳಿದಷ್ಟು ಸರಳವಾದ ಕೆಲಸವೇನಲ್ಲ, ಮತ್ತು ಮಗುವಿಗೆ 'ಕೊಲಿಕ್' ಇದೆ ಎಂದರೆ ಕಷ್ಟವೇ ಸರಿ.

ನೀವು ಗರ್ಭಿಣಿ ಆಗಿರುವ ವಿಷಯವನ್ನು ಹಂಚಿಕೊಂಡಾಗ ಫೋನ್ ಕರೆಗಳು, ಅತಿಥಿಗಳು, ಸ್ನೇಹಿತರು, ಹಿರಿಯರು ಮತ್ತು ನೆರೆಯವರ ಮೂಲಕ ಸಲಹೆಗಳು ಬರಲು ಶುರು ಆಗುತ್ತದೆ. ಪ್ರತಿ ಸಲಹೆ ಮುಖ್ಯವೆಂದು ತೋರುತ್ತದೆ ಆದರೆ ಯಾವದನ್ನು ಅನುಸರಿಸಬೇಕೆಂಬ ಗೊಂದಲ ನಿಮಗೆ ಇರುತ್ತದೆ. ಈ 9 ತಿಂಗಳಿನ ಗರ್ಭವಾಸ್ಥೆಯ ಸಮಯ ನಿಮ್ಮದು, ನಿಮ್ಮ ಹೊಟ್ಟೆಯಲ್ಲಿನ ಮಗು ಮತ್ತು ಪ್ರತಿ ಕಡೆಯಿಂದ ಬರುತ್ತಿರುವ ಸಲಹೆಗಳದ್ದಾಗಿದೆ. ಈ ಸನ್ನಿವೇಶ ನಿಮ್ಮ ಮಗುವಿನ ಆಗಮನದ ನಂತರ ಹೊಸ ಸಲಹೆಗಳ ಮೂಲಕ ಮುಂದುವರಿಯುತ್ತದೆ. ಅನುಸರಿಸಲು ಸೂಕ್ತವಾದ ಸಲಹೆ ಯಾವುದು ಎಂದು ಖಚಿತಪಡಿಸಿಕೊಳ್ಳಲು ನೀವು ಮತ್ತೊಮ್ಮೆ ಗೊಂದಲಗೊಳಗಾಗುವದರಲ್ಲಿ ಸಂದೇಹವೇ ಇಲ್ಲ. ಇದರಲ್ಲಿ ಕೆಲವು ಸಲಹೆಗಳು ಸಾಕಷ್ಟು ಮಿಥ್ಯಗಳನ್ನು ಒಳಗೊಂಡಿರಬಹುದು.

ಅತಿ ತೂಕ ಹೊಂದಿರುವ 4000 ಮಕ್ಕಳ ಪರೀಕ್ಷೆ ಅವರ ಶ್ವಾಶಕೋಶದ ಮೇಲೆ ಆಗುತ್ತಿರುವ ಪರಿಣಾಮ ಮತ್ತು 10 ವಯಸ್ಸಿನ ಮುಂಚೆಯೇ ಅಸ್ತಮಾ ರೋಗದ ಅಪಾಯವನ್ನು ಬಹಿರಂಗ ಪಡಿಸಿದೆ.

ಮಗುವಿನ ಮೊದಲ 3 ವರ್ಷಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತೂಕ ಪಡೆಯುವದರಿಂದ ಬಾಲ್ಯದ ಆಸ್ತಮಾ ಮತ್ತು ದುರ್ಬಲ ಶ್ವಾಸಕೋಶದ ಅಪಾಯಗಳಿಗೆ ಕಾರಣವಾಗಬಹುದು. ವಯಸ್ಸಿಗೆ ಅನುಗುಣವಾಗಿ ತೂಕ ಪಡೆದ ಮಕ್ಕಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಶ್ವಾಸಕೋಶ ಇರುವದನ್ನು ಅತಿ ವೇಗವಾಗಿ ತೂಕ ಪಡೆದ ಮಕ್ಕಳೊಂದಿಗೆ ಹೋಲಿಸಿದಾಗ ಕಂಡುಬಂದಿತು.

ಆಗಸ್ಟ್ ನಲ್ಲಿ ರಾಜಸ್ಥಾನದ ಆರೋಗ್ಯ ಇಲಾಖೆ, ಸೆಪ್ಟಂಬರ್ ಆರಂಭದಿಂದ ಹೊಸ ತಾಯಂದಿರನ್ನು ವೈದ್ಯರು ಡಿಸ್ಚಾರ್ಜ್ ಫಾರ್ಮ್ ಮೇಲೆ ಸ್ಟ್ಯಾಂಪ್ ಮಾಡಿ ಮತ್ತು ತಾಯಿ-ಹಾಲು ಬ್ಯಾಂಕ್ ಸಲಹೆಗಾರರು ಅದನ್ನು ಪ್ರಮಾಣೀಕರಿಸದ ನಂತರವೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮೊದಲ ಆರು ತಿಂಗಳ ಕಾಲ ಮಗುವನ್ನು ಎದೆಹಾಲು ನೀಡುವ ಉದ್ದೇಶದಿಂದ ಹೊಸ ತಾಯಂದಿರು ತಮ್ಮ ಬದ್ಧತೆಗೆ ಡಿಸ್ಚಾರ್ಜ್ ಫಾರಂ ಮೇಲೆ ಸಹಿ ಹಾಕಬೇಕೆಂದು ಕೂಡ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಗು ಪ್ರತಿ ಸ್ತನ್ಯಪಾನದ ನಂತರ ವಾಂತಿ ಮಾಡುತ್ತಿರುವದನ್ನು ಪ್ರಿಯಾ ಗಮನಿಸುತ್ತಾಳೆ. ತನ್ನ ನವಜಾತ ಮಗು 5 ನಿಮಿಷಗಳಿಗಿಂತ ಹೆಚ್ಚು ಕಾಲ ಸ್ತನ್ಯಪಾನ ಮಾಡದೆ ಇರುವದನ್ನು ಮತ್ತು ತುಂಬಾ ಅನಾನುಕೂಲವನ್ನು ಅನುಭವಿಸಿತ್ತಿರುವದನ್ನು ಕೂಡ ಪ್ರಿಯಾ ಗಮನಿಸುತ್ತಾಳೆ. ಮಗುವಿಗೆ ಬೇಕಾಗುವಷ್ಟು ಹಾಲು ದೊರೆಯುತ್ತಿದೆಯೋ ಅಥವಾ ಇಲ್ಲವೋ ಎಂದು ಅವಳಿಗೆ ಚಿಂತೆಯಾಗಿದೆ.

Tuesday, 25 September 2018 05:26

ನವಜಾತ ಶಿಶು ನಿದ್ರೆ

Written by

ನಿಮ್ಮ ಮಗುವಿನ ಆಗಮನದಿಂದ ನೀವು ಸಂತೋಷ, ಉತ್ಸಾಹ ಮತ್ತು ಕೆಲವೊಮ್ಮೆ ಆತಂಕದ ಮಿಶ್ರ ಭಾವನೆಗಳಿಂದ ಕೂಡಿರುವಿರಿ. ಪ್ರಸವದ ಪ್ರಕ್ರಿಯೆಗಳಿಂದ ನೀವು ಮತ್ತು ನಿಮ್ಮ ಮಗು ಸಾಕಷ್ಟು ಸುಸ್ತಾಗಿರುವಿರಿ. ಇದು ಸಾಮಾನ್ಯ. ಆದಷ್ಟು ಅತಿಥಿಗಳನ್ನು ಈ ಸಮಯದಲ್ಲಿ ದೂರವಿಡಿ ಮತ್ತು ಮಗುವಿನ ಅಗತ್ಯಗಳ ಕಡೆಗೆ ಪೂರ್ಣ ಗಮನ ಕೊಡಿ.

ಮನುಷ್ಯನು ಇತರ ಸಸ್ತನಿಗಳ ಹಾಲನ್ನು ಸೇವಿಸುವ ಏಕೈಕ ಸಸ್ತನಿಯಾಗಿದ್ದಾನೆ. ಹಸು ತನ್ನ ಕರುವಿಗೋಸ್ಕರ ಹಾಲನ್ನು ಉತ್ಪಾದಿಸುತ್ತದೆ. ಆದ್ದರಿಂದ, ಹಸುವಿನ ಹಾಲು ಮನುಷ್ಯರಿಗಿಂತ ಮರಿ ಹಸುವಿಗಾಗಿಯೇ ಹೆಚ್ಚು ನಿರ್ದಿಷ್ಟವಾಗಿರುತ್ತದೆ. ಅನೇಕ ಶಿಶುಗಳಿಗೆ ಹಸುವಿನ ಹಾಲಿನಿಂದ ತೊಂದರೆಗಳಿವೆ. ಒಂದು ವರ್ಷದ ಮೊದಲೆಯೇ ಹಸುವಿನ ಹಾಲು ನೀಡಿದ ಶಿಶುಗಳಲ್ಲಿ ರಕ್ತಹೀನತೆ, ಅತಿಸಾರ ಅಥವಾ ವಾಂತಿ, ಮತ್ತು ಅಲರ್ಜಿಯ ಪ್ರತಿಕ್ರಿಯೆಯನ್ನು ಕಾಣಬಹುದು.

ಸಾಮಾನ್ಯವಾಗಿ ಪೋಷಕರು ಫಾರ್ಮುಲಾ ಹಾಲಿನ ಬದಲಿಗೆ ತಮ್ಮ ಮಗುವಿಗೆ ಹಸುವಿನ ಹಾಲನ್ನು ನೀಡುವದರ ಬಗೆಗೆ ಉತ್ಸುಕರಾಗಿರುತ್ತಾರೆ. ಇದು ಕೆಳಗಿನ ಕಾರಣಗಳಿಂದ ಆಗಿರಬಹುದು;

ನಿಮ್ಮ ಮಗುವಿಗೆ ಎದೆಹಾಲು ಅತ್ಯುತ್ತಮವಾಗಿದೆ - ಇದಕ್ಕಿಂತ ದೊಡ್ಡ ಸತ್ಯವಿಲ್ಲ. ನೀವು ಸ್ವಲ್ಪ ಹೊತ್ತಿನವರೆಗೂ ಎದೆಹಾಲು ನೀಡಿದರು ಕೂಡ ಅದು ನಿಮ್ಮ ಮಗುವಿಗೆ ಪ್ರಯೋಜನಕಾರಿಯಾಗಿದೆ. ಆದರೆ ನೀವು ಹೆಚ್ಚು ಎದೆಹಾಲು ನೀಡಿದಷ್ಟು ನಿಮ್ಮ ಮಗು ಹೆಚ್ಚು ರಕ್ಷಣೆ ಪಡೆದುಕೊಳ್ಳುತ್ತದೆ. ಮಗುವಿಗೆ ಪೌಷ್ಠಿಕಾಂಶವಾಗಿ ಎದೆಹಾಲು ಅತ್ಯಂತ ಉತ್ತಮ ಆಯ್ಕೆಯಾಗಿದೆ.

ನಿರ್ದಿಷ್ಟ ಲಿಂಗದ ಮಗುವನ್ನು ಪಡೆಯುವ ಮಾರ್ಗಗಳ ಬಗೆಗೆ ವೀಕ್ಷಕರಿಂದ ನಮಗೆ ಅನೇಕ ಪ್ರಶ್ನೆಗಳು ಬರುತ್ತಾ ಇರುತ್ತವೆ. ಕೆಲವು ಪೋಷಕರು ಕೆಲವು ನಿರ್ದಿಷ್ಟ ಆಹಾರಗಳನ್ನು ತಿನ್ನುತ್ತಿದ್ದರೆ ನಿರ್ದಿಷ್ಟ ಲಿಂಗವನ್ನು ಖಾತರಿಪಡಿಸಬಹುದೆಂದು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ, ಇನ್ನು ಕೆಲವರು ನಿರ್ದಿಷ್ಟ ಗಿಡಮೂಲಿಕೆ ಔಷಧಿ ಅಥವಾ ಲೈಂಗಿಕ ಕ್ರಿಯೆಯ ಸಮಯವು ಗಂಡು ಅಥವಾ ಹೆಣ್ಣು ಮಗುವನ್ನು ಪಡೆಯಲು ಸಹಾಯ ಮಾಡಬಹುದೇ ಎಂದು ತಿಳಿಯಲು ಬಯಸುತ್ತಾರೆ. ಬನ್ನಿ, ಈ ಕುರಿತು ಕೆಲವು ಸತ್ಯ ಮತ್ತು ಮಿಥ್ಯಗಳನ್ನು ತಿಳಿದುಕೊಳ್ಳೋಣ.

Page 1 of 2
Magic love spell by spellcaster. Casting black magic voodoo love spell with doll. White love spells are very effective for love relationships. Riyathakur's official pornstar page https://pornlux.com/pornstar/riyathakur. Library Z-Library z-library zlibrary project