Thursday, 30 August 2018 05:04

ನನ್ನ ಋತುಸ್ರಾವದ ಅವಧಿ ವಿಳಂಬವಾಗಿದೆ ಮತ್ತು ನನ್ನ ಗರ್ಭಧಾರಣೆಯ ಪರೀಕ್ಷೆಯು ನಕಾರಾತ್ಮಕವಾಗಿದೆ - ಅದು ಏಕೆ?

Written by

ಹಿಂದಿನ ಕಾಲದಲ್ಲಿ, ರಕ್ತ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳ ನಂತರ ಗರ್ಭಧಾರಣೆಯನ್ನು ಖಚಿತಪಡಿಸಲಾಗುತ್ತಿತ್ತು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ತಾಂತ್ರಿಕ ಪ್ರಗತಿಯೊಂದಿಗೆ, ನಿಮ್ಮ ಮನೆಯ ಗೌಪ್ಯತೆಯೊಳಗೆ ಗರ್ಭಾವಸ್ಥೆಯನ್ನು ಪತ್ತೆಹಚ್ಚಲು ಮೂತ್ರ ಗರ್ಭಧಾರಣೆಯ ಪರೀಕ್ಷೆ ಸಹಾಯ ಮಾಡುತ್ತದೆ.

 

ಹಲವು ಮಹಿಳೆಯರಲ್ಲಿ ಮುಟ್ಟಿನ ಅಥವಾ ಋತುಚಕ್ರದಲ್ಲಿ ವಿಳಂಬವಾಗಬಹುದು, ಆದರೆ ಮೂತ್ರದ ಗರ್ಭಧಾರಣೆಯ ಪರೀಕ್ಷೆಯು ಋಣಾತ್ಮಕವಾಗಿರುತ್ತದೆ; ಆ ಸಂದರ್ಭಗಳಲ್ಲಿ, ಅವರು ಆಶ್ಚರ್ಯಚಕಿತರಾಗಬಹದು. - ನಾನು ಗರ್ಭಿಣಿಯಾಗಿದ್ದೇನೆ ಅಥವಾ ಇಲ್ಲವೇ? ನಾನು ಗರ್ಭಿಣಿಯಾಗಿದ್ದರೆ, ಪರೀಕ್ಷೆ ಋಣಾತ್ಮಕ ಏಕೆ ಮತ್ತು ನಾನು ಗರ್ಭಿಣಿಯಾಗದೆ ಇದ್ದಲ್ಲಿ ಋತುಚಕ್ರ ವಿಳಂಬವಾಗುವ ಕಾರಣವೇನು - ಈ ತರಹದ ಪ್ರಶ್ನೆಗಳು ಅವರಿಗೆ ಕಾಡಬಹುದು.

 

ಕೆಳಕಂಡ ಕಾರಣಗಳಿಂದ ನಿಮ್ಮ ಗರ್ಭಧಾರಣೆಯ ಪರೀಕ್ಷೆಯು ನಕಾರಾತ್ಮಕವಾಗಿದ್ದರೂ, ನಿಮ್ಮ ಋತುಚಕ್ರದ ಅವಧಿಯಲ್ಲಿ ವಿಳಂಬವಾಗಬಹುದು.

 

i) ನಿಮ್ಮ ಹಾರ್ಮೋನುಗಳ ಮಟ್ಟ ಕಡಿಮೆಯಾಗಿದ್ದರೆ - ಸಾಧಾರಣವಾಗಿ ರಕ್ತದಲ್ಲಿ ಇರುವ HCG ಹಾರ್ಮೋನ್ (Human chorionic gonadotropin) ಮೂತ್ರದಲ್ಲಿ ಕೂಡ ಉತ್ಪತ್ತಿಯಾಗಲು ಶುರುವಾಗುತ್ತದೆ.  ಈ HCG ಹಾರ್ಮೋನ್ ಮೂತ್ರದಲ್ಲಿ ಪತ್ತೆಯಾದಾಗ ನಿಮ್ಮ ಗರ್ಭದಾರಣೆಯ ಪರೀಕ್ಷೆ ಸಕಾರಾತ್ಮವಾಗಿರುತ್ತದೆ. ಆದರೆ ಕೆಲವು ಬಾರಿ HCG ಹಾರ್ಮೋನ್ ನ ಪ್ರಮಾಣ ಗರ್ಭಾವಸ್ಥೆಯ ಸಕಾರಾತ್ಮ ಪರೀಕ್ಷೆಗೆ ಬೇಕಾಗುವಷ್ಟು ಇರುವುದಿಲ್ಲ. ಇದೆ ಕಾರಣದಿಂದಾಗಿ ನಿಮ್ಮ ಗರ್ಭಾವಸ್ಥೆಯ ಪರೀಕ್ಷೆ ಋಣಾತ್ಮಕವಾಗಬಹುದು. ಗೃಹ ಗರ್ಭಧಾರಣೆಯ ಪರೀಕ್ಷೆಗಳು HCG ಯ ಮಟ್ಟ 25 mlU/ml ಮೇಲೆ ಇದ್ದರೆ ಮಾತ್ರ ಪತ್ತೆ ಹಚ್ಚಬಹುದು. ಪ್ರತಿ ಮಹಿಳೆಯ ಋತುಚಕ್ರ ಮತ್ತೊಬ್ಬರಿಂದ ವಿಭಿನ್ನವಾಗಿರುವುದರಿಂದ, ದೀರ್ಘಾವಧಿಯ ಆವರ್ತನದ ನಂತರ ಅಂಡೋತ್ಪತ್ತಿ ಸಂಭವಿಸಿರಬಹುದು ಮತ್ತು ನಿಮ್ಮ ಹಾರ್ಮೋನ್ ಮಟ್ಟವು ಪರೀಕ್ಷೆಯಲ್ಲಿ ಕಡಿಮೆಯಾಗಬಹುದು. ಅಂತಹ ಸಂದರ್ಭಗಳಲ್ಲಿ, ಮಹಿಳೆಯರಿಗೆ ಕೆಲವು ದಿನಗಳವರೆಗೆ ನಿರೀಕ್ಷಿಸಿ ಮತ್ತು ಪರೀಕ್ಷೆಯನ್ನು ಪುನರಾವರ್ತಿಸಿ ಎಂದು ಸಲಹೆ ನೀಡಲಾಗುತ್ತದೆ. ಪುನರಾವರ್ತಿತ ಪ್ರಯೋಗಗಳ ಹೊರತಾಗಿಯೂ, ಅದು ನಕಾರಾತ್ಮಕತೆಯನ್ನು ತೋರಿಸುತ್ತಿದ್ದರೆ, ನಂತರ ವಿಳಂಬದ ಇತರ ಕಾರಣಗಳಿಗಾಗಿ ನಿಮ್ಮ ವೈದ್ಯರಿಗೆ ಸಂಪರ್ಕಿಸುವುದು ಒಳ್ಳೆಯದು.

 

ii) ಎಕ್ಟೋಪಿಕ್ ಪ್ರೆಗ್ನೆನ್ಸಿ - ಅಪರೂಪದ ಸಂದರ್ಭಗಳಲ್ಲಿ, ಅಪಸ್ಥಾನೀಯ ಗರ್ಭಾವಸ್ಥೆ (ಗರ್ಭಾಶಯದ ಹೊರತುಪಡಿಸಿ, ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್ಗಳು ಮುಂತಾದ ಸಂತಾನೋತ್ಪತ್ತಿ ವ್ಯವಸ್ಥೆಯ ಇತರ ಭಾಗಗಳಲ್ಲಿ ಫಲವತ್ತಾದ ಮೊಟ್ಟೆಯು ಅಳವಡಿಸಲ್ಪಟ್ಟಿರುವ ಸ್ಥಿತಿ) ಗರ್ಭಾವಸ್ಥೆ ಪರೀಕ್ಷೆಯ ನಕಾರಾತ್ಮಕ ಫಲಿಂತಾಶಕ್ಕೆ ಕಾರಣವಾಗಬಹುದು. ನಿಮ್ಮ ಗರ್ಭಧಾರಣೆಯ ಪರೀಕ್ಷೆಯು ನಕಾರಾತ್ಮಕವಾಗಿದ್ದು ಮತ್ತು ನಿಮಗೆ ಈ ರೋಗಲಕ್ಷಣಗಳು ಇದ್ದಲ್ಲಿ ವೈದ್ಯರೊಂದಿಗೆ ಮಾತನಾಡಿ.

- ಕೆಳ ಹೊಟ್ಟೆಯಲ್ಲಿ ತೀವ್ರವಾದ ನೋವು

- ತಲೆತಿರುಗುವಿಕೆ

- ರಕ್ತಸ್ರಾವ

 

iii) ಅನಿಯಮಿತ ಅವಧಿಗಳಲ್ಲಿ ಜೀವನಶೈಲಿ ಬದಲಾಯಿಸುವುದು ಒಂದು ಪ್ರಮುಖ ಅಂಶವಾಗಿದೆ. ಒತ್ತಡ, ಅಪೌಷ್ಟಿಕತೆ ಮತ್ತು ಅನುಚಿತ ಆಹಾರ, ಹೆಚ್ಚು ಕಾಫಿ ತೆಗೆದುಕೊಳ್ಳುವದರಿಂದ ಕೂಡ ಪರಿಣಾಮ ಬೀರಬಹುದು. ಅತಿಯಾದ ವ್ಯಾಯಾಮಗಳು, ರಾತ್ರಿಯ ನೌಕರಿ ಮತ್ತು ಅನಿಯಮಿತ ನಿದ್ದೆ ಮತ್ತು ತಿನ್ನುವ ಪದ್ಧತಿಗಳಂತಹ ನಿಮ್ಮ ಜೀವನಶೈಲಿಯಲ್ಲಿನ ಹಠಾತ್ ಬದಲಾವಣೆಗಳು ಎಲ್ಲಾ ಅವಧಿಗಳ ಮೇಲೆ ಪ್ರಭಾವ ಬೀರುತ್ತವೆ.

 

iv) ಸ್ತನಪಾನವು ಋತುಚಕ್ರದ ಅವಧಿಗಳನ್ನು ವಿಳಂಬಗೊಳಿಸಬಹುದು. ಮಗುವಿನ ಜನ್ಮದ ಬಳಿಕ, ನೀಮಗೆ ಕೆಲವು ದಿನಗಳವರೆಗೆ ರಕ್ತಸ್ರಾವವಾಗಬಹುದು. ಮಗುವಿಗೆ ಹಾಲುಣಿಸುವ ತನಕ ಋತುಸ್ರಾವದಲ್ಲಿ ಏರುಪೇರು ಆಗಬಹುದು.

 

v) ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್ (Polycystic ovarian syndrome (PCOS)) ಅಥವಾ ಹೈಪೋಥೈರಾಯ್ಡಿಸಮ್ನಂತಹ (hypothyroidism) ಕೆಲವು ವೈದ್ಯಕೀಯ ಪರಿಸ್ಥಿತಿಗಳು ಮಹಿಳೆಯರಿಗೆ ಹೆಚ್ಚು ಅನಿಯಮಿತ ಚಕ್ರಗಳನ್ನು ಮತ್ತು ತಪ್ಪಿದ ಋತುಸ್ರಾವದ ಅವಧಿಗಳನ್ನು ಉಂಟುಮಾಡಬಹುದು. ಕೆಲವು ಮಹಿಳೆಯರಲ್ಲಿ ತುಂಬಾ ಕಡಿಮೆ ಋತುಸ್ರಾವ ಆಗಬಹುದು, ಕೆಲವರಲ್ಲಿ ಭಾರೀ ಋತುಸ್ರಾವ ಆಗಬಹುದು ಮತ್ತು ಇನ್ನೂ ಕೆಲವರಲ್ಲಿ ಋತುಸ್ರಾವ ಆಗದೆ ಹೋಗಬಹುದು.

 

vi) ಜನನ ನಿಯಂತ್ರಣ ಮಾತ್ರೆಗಳಂತಹ ಕೆಲವು ಔಷಧಗಳು ನಿಮ್ಮ ಋತುಚಕ್ರದಲ್ಲಿ ಏರುಪೇರು ಉಂಟುಮಾಡಬಹುದು.

ಆದ್ದರಿಂದ ಕಾಣೆಯಾದ ಋತುಚಕ್ರ ಅವಧಿಗಳಿಗೆ ಕೇವಲ ಗರ್ಭಾವಸ್ಥೆ ಕಾರಣ ಮಾತ್ರವಲ್ಲ. ಇದು ಹಲವಾರು ಅಂಶಗಳಿಂದ ಉಂಟಾಗುತ್ತದೆ ಮತ್ತು ನಿಮ್ಮ ಋತುಚಕ್ರದ ಮಾದರಿಯಲ್ಲಿ ಬದಲಾವಣೆಯನ್ನು ನೀವು ಗಮನಿಸಿದರೆ ಮತ್ತು ಅದು 2 ರಿಂದ 3 ಆವರ್ತನಗಳಿಗಿಂತಲೂ ಮುಂದುವರಿದರೆ ಅಥವಾ 3 ತಿಂಗಳ ಅವಧಿಗೆ ನೀವು ಹೊಂದಿರದಿದ್ದರೆ, ದಯವಿಟ್ಟು ವೈದ್ಯರ ಅಭಿಪ್ರಾಯ ಪಡೆದುಕೊಳ್ಳಿ. ವಿಳಂಬದ ಕಾರಣಕ್ಕಾಗಿ ವೈದ್ಯರು ಕೆಲವು ರೋಗನಿರ್ಣಯ ಪರೀಕ್ಷೆಗಳನ್ನು ಆದೇಶಿಸಬಹುದು.

Last modified on Thursday, 30 August 2018 06:26
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.

Magic love spell by spellcaster. Casting black magic voodoo love spell with doll. White love spells are very effective for love relationships. Riyathakur's official pornstar page https://pornlux.com/pornstar/riyathakur. Library Z-Library z-library zlibrary project