Thursday, 20 September 2018 09:49

ಮಗುವಿನ ಬೆಳವಣಿಗೆಯನ್ನು ಸುಧಾರಿಸುವಲ್ಲಿ ಗರ್ಭಾವಸ್ಥೆಯಲ್ಲಿ ಮೀನು-ಎಣ್ಣೆ-ಪೂರಕಗಳು ಹೇಗೆ ಸಹಾಯ ಮಾಡುತ್ತದೆ?

Written by

ಗರ್ಭಾವಸ್ಥೆಯಲ್ಲಿ ಮಹಿಳೆಯರು ಮೀನಿನ-ಎಣ್ಣೆ-ಪೂರಕಗಳನ್ನು ಸೇವಿಸುವದರಿಂದ ತಮ್ಮ ಮಕ್ಕಳ ಬಾಲ್ಯದ ಆರಂಭದಲ್ಲಿ ಮೂಳೆ ಮತ್ತು ಮಾಂಸಖಂಡಗಳ ಆರೋಗ್ಯಕರ ಬೆಳವಣಿಗೆಯಾಗುವುದು ಎಂದು ಒಂದು ಡ್ಯಾನಿಷ್ ಸಂಶೋಧನೆ ಬಹಿರಂಗ ಪಡಿಸಿದೆ.

 

ದ್ವಿತೀಯ ತ್ರೈಮಾಸಿಕದ ನಂತರ ಪ್ರತಿ ದಿನ ಒಮೇಗಾ-3 ಫ್ಯಾಟಿ ಆಸಿಡ್ ಮಾತ್ರೆಗಳನ್ನು ತಗೆದುಕೊಂಡ ಮಹಿಳೆಯರಿಗೆ 6 ವರ್ಷದವರೆಗೆ ಆರೋಗ್ಯಕರ ಮೂಳೆ ಮತ್ತು ಮಾಂಸಖಂಡಗಳ ಸಾಂದ್ರತೆ (BMI) ಹೊಂದಿದ ಮಕ್ಕಳು ಇದ್ದರು ಎಂದು ಡೆನ್ಮಾರ್ಕ್ ನ ಕೋಪನ್ಹೇಗನ್ ವಿಶ್ವವಿದ್ಯಾಲಯದ  ಒಂದು ಸಂಶೋಧನೆ ತಿಳಿಸುತ್ತದೆ.

 

ತಮ್ಮ ಗರ್ಭಾವಸ್ಥೆಯಲ್ಲಿ ಆಲಿವ್-ಎಣ್ಣೆ-ಪ್ಲಸಿಬೊ ಮಾತ್ರೆಗಳನ್ನು ತಗೆದುಕೊಂಡ ತಾಯಿಯಂದಿರ ಮಕ್ಕಳನ್ನು ಮತ್ತು ಒಮೇಗಾ-3 ಫ್ಯಾಟಿ ಆಸಿಡ್ ಮಾತ್ರೆಗಳನ್ನು ತೆಗೆದುಕೊಂಡ ಮಹಿಳೆಯರ ಮಕ್ಕಳೊಂದಿಗೆ ಒಂದು ಕ್ಷ-ಕಿರಣ ಸ್ಕ್ಯಾನ್ ನ ಫಲಿತಾಂಶಕ್ಕೆ ಹೋಲಿಕೆ ಮಾಡಿ ನೋಡಿದಾಗ ಒಮೇಗಾ-3 ಫ್ಯಾಟಿ ಆಸಿಡ್ ಮಾತ್ರೆಗಳನ್ನು ತೆಗೆದುಕೊಂಡ ಮಹಿಳೆಯರ ಮಕ್ಕಳ ಮೂಳೆ ಮತ್ತು ಮಾಂಸಖಂಡಗಳ ಸಾಂದ್ರತೆಯು (BMI)  ಹೆಚ್ಚು ಆರೋಗ್ಯಕರ ಆಗಿತ್ತು ಮತ್ತು ಇವರಲ್ಲಿ ತುಂಬಾ ಕಡಿಮೆ ಅನಾರೋಗ್ಯಕರ ಬೊಜ್ಜು ಕಂಡು ಬಂದಿತು.

 

ಈ ಸ್ಕ್ಯಾನ್ ಗಳು,  ಒಮೇಗಾ-3 ಫ್ಯಾಟಿ ಆಸಿಡ್ ಮಾತ್ರೆಗಳು ಈ ಮಕ್ಕಳಲ್ಲಿ ಆಸ್ತಮಾ ಮತ್ತು ಇತರ ಉಸಿರಾಟದ ಸಂಬಂಧಿತ ಲಕ್ಷಣಗಳನ್ನು ಕಡಿಮೆಗೊಳಿಸುತ್ತವೆ ಎಂದು ಕೂಡ ತೋರಿಸಿಕೊಟ್ಟವು.

 

ಈ ಪೂರಕಗಳು ಬೆಳವಣಿಗೆಯನ್ನು ಉತ್ತೇಜಿಸುವ ಗುಣವನ್ನು ಹೊಂದಿದೆ ಎಂದು ಸಂಶೋಧನೆಯು ತೋರಿಸುತ್ತದೆ ಆದ್ದರಿಂದ ಎಲ್ಲಾ ತಾಯಂದಿರು ಜನ್ಮ ನೀಡುವ ಮೊದಲು ಈ ಪೂರಕವನ್ನು ಸೇವಿಸಲು ಉತ್ತೇಜಿಸುತ್ತದೆ.

 

ಒಮೇಗಾ-3 ಕೊಬ್ಬುಗಳು ಒಂದು ಉದ್ದ-ಸರಪಳಿಯ ಅಣುಗಳಾಗಿವೆ ಮತ್ತು ಇವು ಕಾಡ್ ಲಿವರ್ ಎಣ್ಣೆಯಲ್ಲಿ ಮತ್ತು ಈತರ ಪೂರಕಗಲ್ಲಿ ಹೇರಳವಾಗಿ ಸಿಗುತ್ತವೆ. ಒಮೇಗಾ-3 ಹೃದಯದ ಕಾಯಿಲೆಗಳ ವಿರುದ್ಧ ರಕ್ಷಣೆ, ಮಿದುಳಿನ ಶಕ್ತಿ ಮತ್ತು ಕೀಲು ಆರೋಗ್ಯ ವೃದ್ಧಿಗೆ ಉಪಯೋಗಕಾರಿಯಾಗಿದೆ.

 

ಅಗತ್ಯವಾದ ಈ ಕೊಬ್ಬುಗಳನ್ನು ನಮ್ಮ ದೇಹ ಉತ್ಪಾದಿಸುವದಿಲ್ಲ ಆದ್ದರಿಂದ ಇದನ್ನು ನಮ್ಮ ಆಹಾರಗಳಲ್ಲಿ ಸೇರಿಸಕೊಳ್ಳಬೇಕು.

 

ಇಂಪೀರಿಯಲ್ ಕಾಲೇಜ್ ಲಂಡನ್ ನ  ವಿಶ್ಲೇಷಣೆಯು, ಗರ್ಭಾವಸ್ಥೆಯಲ್ಲಿ ಈ ಮಾತ್ರೆಗಳನ್ನು ತೆಗೆದುಕೊಂಡ ತಾಯಿಯಂದಿರ ಮಕ್ಕಳಲ್ಲಿ ಆಹಾರ ಅಲರ್ಜಿಯ ಸಾಧ್ಯತೆಗಳು ಕಡಿಮೆಯಾಗಿದೆ ಎಂದು ವಿವರಿಸುತ್ತದೆ.

 

ಒಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಪ್ರಕಟಿಸಿದ ಇತ್ತೀಚಿನ ಸಂಶೋಧನೆಯು 736 ಡ್ಯಾನಿಷ್ ಮಹಿಳೆಯರು ಮತ್ತು ಅವರ ಮಕ್ಕಳನ್ನು ಒಳಗೊಂಡಿತ್ತು. ಅವರಿಗೆ ಯಾದೃಚ್ಛಿಕವಾಗಿ ಒಮೇಗಾ-3 ಮಾತ್ರೆಗಳು ಅಥವಾ ನಕಲಿ ನಿಯಂತ್ರಣ ಮಾತ್ರೆಗಳನ್ನು (dummy control pill) ಗರ್ಭಾವಸ್ಥೆಯ 24 ನೇ ವಾರದಿಂದ ಹಿಡಿದು ತಮ್ಮ ಮಗುವಿನ ಜನನದ 1 ವಾರದವರೆಗೆ ತೆಗೆದುಕೊಳ್ಳಲು ತಿಳಿಸಿತು.

 

ಈ ಅಧ್ಯಯನದ ಮೊದಲ ಗುರಿ ಮೀನಿನ-ಎಣ್ಣೆ-ಪೂರಕಗಳನ್ನು ತೆಗೆದುಕೊಳ್ಳುವ ಮಹಿಳೆಯರಲ್ಲಿ ಆಸ್ತಮಾ ದರದ ನಿಯಂತ್ರಣದ ಮಟ್ಟವನ್ನು ತಿಳಿದುಕೊಳ್ಳುವದಾಗಿತ್ತು ಮತ್ತು 30% ರಷ್ಟು ಆಸ್ತಮಾ ರೋಗದ ನಿಯಂತ್ರಣ ಆಗಿರುವದನ್ನು ಈ ಅಧ್ಯಯನ ಕಂಡುಕೊಂಡಿತು.  ಈ ಅಧ್ಯನಯದ ಎರಡನೇ ಹಂತವಾಗಿ ಮಕ್ಕಳ ಎತ್ತರ ಮತ್ತು ತೂಕದ ಮೇಲೆ ಪ್ರತಿವರ್ಷ ನಿಗಾ ಇಡುವುದಾಗಿತ್ತು ಮತ್ತು 3.5 ಮತ್ತು 6 ವರ್ಷಕೊಮ್ಮೆ ಕ್ಷ-ಕಿರಣ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿತ್ತು.

Last modified on Friday, 21 September 2018 08:09
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.

Magic love spell by spellcaster. Casting black magic voodoo love spell with doll. White love spells are very effective for love relationships. Riyathakur's official pornstar page https://pornlux.com/pornstar/riyathakur. Library Z-Library z-library zlibrary project