Wednesday, 12 September 2018 09:46

ಮಗುವಿಗೆ ಎದೆ ಹಾಲು ಸಾಕಾಗುತ್ತದೆಯೇ?

Written by
Rate this item
(0 votes)

ಹೊಸ ತಾಯಂದಿರು ತಮ್ಮ ಮಗುವಿಗೋಸ್ಕರ ಸಾಕಷ್ಟು ಎದೆಹಾಲು ಉತ್ಪಾದಿಸುತ್ತಿದ್ದಾರಿಯೊ ಅಥವಾ ಇಲವೋ ಎಂಬುದರ ಬಗ್ಗೆ ಯಾವಾಗ್ಲೂ ಚಿಂತಿಸುತ್ತಿರುತ್ತಾರೆ. ಸ್ತನ್ಯಪಾನ ಮತ್ತು ಎದೆ ಹಾಲು ಹೆಚ್ಚಿಸುವ ವಿಧಾನಗಳ ಬಗ್ಗೆ ನನಗೆ ಅನೇಕ ಪ್ರಶ್ನೆಗಳನ್ನು ನನ್ನ ವೀಕ್ಷಕರು ಕೇಳುತ್ತಾ ಇರುತ್ತಾರೆ. ನಿಮ್ಮ ಮಗುವಿನ ಆಹಾರಕ್ಕಾಗಿ ಸ್ತನ್ಯಪಾನವು ಅತ್ಯಂತ ನೈಸರ್ಗಿಕ ಮಾರ್ಗವಾಗಿದೆ. ನಿಮ್ಮ ಮಗುವಿಗೆ ಎದೆಹಾಲು ಅತ್ಯುತ್ತಮ ಆಹಾರವಾಗಿದೆ. ನಿಮ್ಮ ಹಾಲು ಪೂರೈಕೆಯನ್ನು ಹೆಚ್ಚಿಸಲು ಯಾವುದೇ ಮಾಯಾ ಮಾತ್ರೆಗಳಿಲ್ಲ.

 

ನಿಮ್ಮ ದೇಹ ನಿಮ್ಮ ಶಿಶುಗೋಸ್ಕರ ಹಾಲು ಉತ್ಪಾದಿಸುತ್ತೀರುತ್ತದೆ ಮತ್ತು ನಿಮ್ಮ ಮಗುವಿಗೆ ಹೆಚ್ಚು ಸ್ತನ್ಯಪಾನ ನೀಡುವದರಿಂದ ದೇಹವು ಹೆಚ್ಚು ಹಾಲು ಉತ್ಪಾದಿಸುತ್ತದೆ.

 

ಸಾಧ್ಯವಾದಷ್ಟು ಬೇಗ ಸ್ತನ್ಯಪಾನ ಪ್ರಾರಂಭಿಸುವದರಿಂದ ಸಂಪೂರ್ಣ ಎದೆಹಾಲಿನ ಪೂರೈಕೆಯ ಸ್ಥಾಪಿತವಾಗುತ್ತದೆ. ಶಿಶುವಿನ ಜನನದ ನಂತರ ಶೀಘ್ರದಲ್ಲಿಯೇ ಸ್ತನ್ಯಪಾನ ಶುರು ಮಾಡುವದರಿಂದ ಮಗು ಮತ್ತು ತಾಯಿಯ ನಡುವಿನ ಬಾಂಧವ್ಯ ಬಲವಾಗುತ್ತದೆ. ನಿಮ್ಮ ಎದೆಯನ್ನು ಮಗುವಿಗೆ ಸಾಧ್ಯವಾದಷ್ಟು ಬಾರಿ ನೀಡಿ ಇದರಿಂದ ಮಗು ನಿಮ್ಮ ಮೊಲೆತೊಟ್ಟುಗಳನ್ನು ಸರಿಯಾಗಿ ಬಾಯಲ್ಲಿ ತೆಗೆದುಕೊಳ್ಳುವದನ್ನು ಕಲಿಯಲು ಸಹಾಯವಾಗುತ್ತದೆ. ನಿಮ್ಮ ಮೊಲೆತೊಟ್ಟುಗಳನ್ನು ಮಗು ಸರಿಯಾಗಿ ಬಾಯಲ್ಲಿ ತೆಗೆದುಕೊಳ್ಳುವದು ಒಂದು ಒಳ್ಳೆಯ ಶುಶ್ರೂಷಾ ಉದಾಹರಣೆಯಾಗಿದೆ. 

 

ವಿವಿಧ ಕಾರಣಗಳಿಂದಾಗಿ ಕೆಲವು ಮಹಿಳೆಯರಲ್ಲಿ ಆರಂಭದಲ್ಲಿ ಕಡಿಮೆ ಎದೆಹಾಲಿನ ಪೂರೈಕೆ ಇದೆ –

- ಸ್ತನ್ಯಪಾನ ಪ್ರಾರಂಭಿಸುವದರಲ್ಲಿ ವಿಳಂಬ

- ಸ್ತನ್ಯಪಾನದ ಮಧ್ಯೆ ಫಾರ್ಮುಲಾ ಹಾಲು ನೀಡುವದು

- ಆರಂಭಿಕ ದಿನಗಳಲ್ಲಿ ವೈದ್ಯಕೀಯ ಕಾರಣಗಳಿಂದಾಗಿ ತಾಯಿ ಮತ್ತು ಮಗುವಿನ ಬೇರ್ಪಡಿಕೆ (ತಾಯಿ ಅಥವಾ ಮಗುವಿನ ಅನಾರೋಗ್ಯ).

- ಮಗು ಮೊಲೆತೊಟ್ಟುಗಳನ್ನು ಸರಿಯಾಗಿ ಬಾಯಲ್ಲಿ ಸಿಗದೇ ಇರುವುದು (ಸಪಾಟವಾದ ಮೊಲೆತೊಟ್ಟುಗಳು).

- ಮಹಿಳೆಯರು PCOD ಅಥವಾ ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿದ್ದರೆ ಅಥವಾ ಯಾವುದೇ ಔಷಧಿಗಳು ತೆಗೆದುಕೊಳ್ಳುತ್ತಿದ್ದರೆ ಹಾಲಿನ ಪೂರೈಕೆ ಕಡಿಮೆಯಾಗಬಹುದು.

 

ಕೆಲವೊಮ್ಮೆ, ಅಮ್ಮಂದಿರು ಮಗು ಸರಿಯಾಗಿ ಮೊಲೆತೊಟ್ಟುಗಳನ್ನು ಬಾಯಲ್ಲಿ ತೆಗೆದುಕೊಳ್ಳುವದರಲ್ಲಿ ವಿಫಲವಾದಲ್ಲಿ ಪುನಃ-ಪುನಃ  ಪ್ರಯತ್ನಿಸುವ ಅವಕಾಶ ನೀಡುವ ಬದಲು ಫಾರ್ಮುಲಾ ಹಾಲನ್ನು ನೀಡಲು ಶುರು ಮಾಡುತ್ತಾರೆ. ಇನ್ನು ಕೆಲವು ಸನ್ನಿವೇಶಗಳಲ್ಲಿ ಮಗುವಿಗೆ ಸಾಕಷ್ಟು ಹಾಲು ದೊರೆಯುತ್ತಿದೆಯೋ ಅಥವಾ ಇಲ್ಲವೋ ಎಂಬ ಅನುಮಾನದಲ್ಲಿ ಸ್ತನ್ಯಪಾನದ ಜೊತೆ ಫಾರ್ಮುಲಾ ಹಾಲನ್ನು ನೀಡುತ್ತಾರೆ. ಇದು ಒಳ್ಳೆಯದಲ್ಲ ಯಾಕೆಂದರೆ, ಮಗುವಿಗೆ ಬಾಟಲಿಯಿಂದ ಹಾಲನ್ನು ಹೀರಿಕೊಳ್ಳುವದು ಎದೆಹಾಲನ್ನು ಹೀರಿಕೊಳ್ಳುವದಕ್ಕಿಂತ ತುಂಬಾ ಸುಲಭವಾಗಿದೆ. ಇದರಿಂದ ಮಗು ಕೇವಲ ಫಾರ್ಮುಲ ಹಾಲನ್ನು ಕುಡಿಯಲು ಅಭ್ಯಾಸ ಬೆಳಿಸಕೊಳ್ಳಬಹುದು. ಈ ಕಾರಣದಿಂದಾಗಿ ತಾಯಿಯಂದರಲ್ಲಿ ಹಾಲು ಕಡಿಮೆ ಉತ್ಪನ್ನವಾಗುತ್ತದೆ.

 

ಮಗುವಿಗೆ ಸಾಕಷ್ಟು ಹಾಲು ಸಿಗುತ್ತಿದೆ ಎಂದು ಈ ಕೆಳಕಂಡ ಅಂಶಗಳಿಂದ ಖಾತರಿಪಡಿಸಿಕೊಳ್ಳಿ:

- ಶಿಶುಗಳು 24 ಗಂಟೆಗಳಲ್ಲಿ ಕನಿಷ್ಠ 6-7 ನೆಪಿಯನ್ನು ತೇವಗೊಳಿಸುತ್ತಾರೆ.

- ಶಿಶುಗಳು ಸ್ತನ್ಯಪಾನಕ್ಕಾಗಿ ಎಚ್ಚರವಾಗುತ್ತಾರೆ.

- ಶಿಶುಗಳು ದಿನಕ್ಕೆ 8 ರಿಂದ 12 ಬಾರಿ ಸ್ತನ್ಯಪಾನ ಮಾಡುತ್ತಾರೆ (24 ಗಂಟೆಯೊಳಗೆ).

- ಮೃದು ಹಳದಿ ಮಲ ವಿಸರ್ಜನೆ ಮಾಡುತ್ತಾರೆ.

- ಹೆಚ್ಚಾಗಿ ಶಿಶುಗಳು ಸ್ತನ್ಯಪಾನದ ನಂತರ ನಿದ್ದೆಗೆ ಜಾರುತ್ತಾರೆ.

- ಸುಮಾರು 2 ವಾರಗಳಲ್ಲಿ ಮಗು ಜನನದ ತೂಕಕ್ಕೆ ಮರಳುತ್ತದೆ.

- ಮೊದಲ 3 ತಿಂಗಳುಗಳಲ್ಲಿ ವಾರಕ್ಕೆ ಸರಾಸರಿ 150 ಗ್ರಾಂನಷ್ಟು ಹೆಚ್ಚು ತೂಕ ಪಡೆದುಕೊಳ್ಳುತ್ತಾರೆ.

 

ನಿಮ್ಮ ಮಗುವಿನ ಸಾಮಾನ್ಯ ಅಭಿವೃದ್ಧಿ ಮತ್ತು ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ನೀವು ಸಾಕಷ್ಟು ಹಾಲು ಪೂರೈಕೆ ಮಾಡದಿದ್ದರೆ, ಹಾಲಿನ ಪೂರೈಕೆ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ, ಕಡಿಮೆ ಹಾಲಿನ ಪೂರೈಕೆ ತಾತ್ಕಾಲಿಕ ಸ್ಥಿತಿಯಾಗಿದೆ, ಇದು ಸರಿಯಾದ ಹಾಲುಣಿಸುವದರಿಂದ ಮತ್ತು ನಿರ್ವಹಣೆಯೊಂದಿಗೆ ಉತ್ತಮವಾಗುತ್ತದೆ. ನಿಮ್ಮ ಮಗುವಿಗೆ ಹೆಚ್ಚು ಎದೆಹಾಲು ನೀಡಿದಷ್ಟು ನೀವು ಹೆಚ್ಚು ಹಾಲು ಉತ್ಪಾದಿಸುವಿರಿ. ಸಾಂದರ್ಭಿಕವಾಗಿ, ಮಗುವಿನ ಬೆಳವಣಿಗೆಯ ಸಮಯದಲ್ಲಿ ಮಹಿಳೆಯರು ಹೆಚ್ಚಾಗಿ ತಿನ್ನುವದರಿಂದ ಮಹಿಳೆಯರು ಹೆಚ್ಚು ಹಾಲು ಉತ್ಪಾದಿಸುತ್ತಾರೆ. ಈ ವಿಷಯ ನಿಮಗೆ ತಿಳಿದಿರಲಿ - ಮಗು ಜಾಸ್ತಿ ಹಾಲು ಕುಡಿದಷ್ಟು ತಾಯಿಯಲ್ಲಿ ಜಾಸ್ತಿ ಹಾಲು ಉತ್ಪನ್ನವಾಗತ್ತದೆ, ಅದೇ ರೀತಿ, ಮಗು ಕಡಿಮೆ ಹಾಲು ಕುಡಿದಷ್ಟು ತಾಯಿಯಂದರಲ್ಲಿ ಕಡಿಮೆ ಹಾಲು ಉತ್ಪನ್ನವಾಗುತ್ತದೆ.

- ಮಗುವಿಗೆ ಮೊಲೆತೊಟ್ಟು ಚೆನ್ನಾಗಿ ಸಿಗುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಿ.

­- ಪ್ರತಿ ಸ್ತನ್ಯಪಾನದ ವೇಳೆಯಲ್ಲಿ, ಎರಡೂ ಸ್ತನಗಳಿಂದ ಮಗುವಿಗೆ ಹಾಲುಣಿಸಿ.

- ನಿಮ್ಮ ಮಗುವಿಗೆ ಹೆಚ್ಚಾಗಿ ಸ್ತನ್ಯಪಾನ ಮಾಡಲು ಯಾವಾಗಲು ಸಿದ್ಧರಾಗಿರಿ - 24 ಗಂಟೆಗಳಲ್ಲಿ ಸ್ತನ್ಯಪಾನವು ಕನಿಷ್ಠ 8 ಬಾರಿ ನೀಡಬೇಕು.

- ಯಾವತ್ತೂ 5 ಗಂಟೆಗಳಿಗಿಂತ ಹೆಚ್ಚು ಕಾಲ ಹಾಲುಣಿಸದೆ ಇರಬೇಡಿ.

- ಪ್ರತಿ ಸ್ತನ್ಯಪಾನದ ನಂತರ ಯಾವಾಗಲೂ ನೀರನ್ನು ಕುಡಿಯಿರಿ.

- ಸಮತೋಲಿತ ಪೌಷ್ಟಿಕ ಆಹಾರವನ್ನು ಸೇವಿಸಿ

Read 5334 times Last modified on Wednesday, 12 September 2018 10:02
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.

Magic love spell by spellcaster. Casting black magic voodoo love spell with doll. White love spells are very effective for love relationships. Riyathakur's official pornstar page https://pornlux.com/pornstar/riyathakur. Library Z-Library z-library zlibrary project